Notice Board :: Last Updated on 05/06/2020

Notice Board 2018 - 19                  Earlier Notice Board Archives
 
Projects
Your Property / Site Status
City Planning
Allotment of Sites
Catalog & Indexing
Notice Board
Meeting Proceedings
Notifications
Tender
Auctions
ACTS
Frequently Asked Questions
   
   
 

 

 

ಸಂಖ್ಯೆ ಮೈನಪ್ರಾ/ಆಆಸಶಾ/2020-21 5ನೇ ಜೂನ್, 2020

ವಿಶ್ವ ಪರಿಸರ ದಿನದ ಪ್ರಯುಕ್ತ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಪ್ರಾಧಿಕಾರದ ವ್ಯಾಪ್ತಿಯ ವಿವಿಧ ಉದ್ಯಾನವನಗಳಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸನ್ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ.ಎಸ್.ಟಿ.ಸೋಮಶೇಖರ್‍ರವರು ಹಂಚ್ಯಾ ಸಾತಗಳ್ಳಿ ಬಿ ವಲಯ ಬಡಾವಣೆಯ ಉದ್ಯಾನವನದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಸ್ಥಳದಲ್ಲಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ.ತನ್ವೀರ್‍ಸೇಠ್‍ರವರು, ಮಹಾನಗರಪಾಲಿಕೆ ಸದಸ್ಯರು, ಜನಪ್ರತಿನಿಧಿಗಳು, ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ.ಅಭಿರಾಮ್ ಜಿ ಶಂಕರ್, ಮಹಾನಗರಪಾಲಿಕೆ ಆಯುಕ್ತರಾದ ಶ್ರೀ.ಗುರುದತ್ ಹೆಗಡೆ, ಪ್ರಾಧಿಕಾರದ ಆಯುಕ್ತರಾದ ಡಾ.ನಟೇಶ್ ಡಿ.ಬಿ ಇತರೆ, ಅಧೀಕ್ಷಕ ಅಭಿಯಂತರು ಶ್ರೀ.ಶಂಕರ್, ನಗರ ಯೋಜಕ ಸದಸ್ಯರು ಶ್ರೀ.ಬಿ.ಎನ್.ಗಿರೀಶ್‍ರವರು ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

ಮೈಸೂರು ನಗರದ ವಿವಿಧ ಉದ್ಯಾನವನಗಳಲ್ಲಿ ಹಲಸು, ನೇರಳೆ, ಬೇವು, ಮಹಾಘನಿ, ಪುಷ್ಪ, ಹತ್ತಿ, ಅರಳಿ ಇತರೆ ಹೂವು ಮತ್ತು ಹಣ್ಣು ಬಿಡುವ ಮರಗಳ ಗಿಡಗಳನ್ನು ಒಟ್ಟಾರೆ 2000ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.

(ಡಾ.ನಟೇಶ್ ಡಿ ಬಿ)
ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು

 
 

ಸಂಖ್ಯೆ :ಮೈ.ನ.ಪ್ರಾ/ವಿದ್ಯುತ್ ಉಪವಿಭಾಗ/2019-20 12.02.2020

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಕಛೇರಿಯ ಕಟ್ಟಡದ ಮೇಲ್ಛಾವಣಿಯಲ್ಲಿ 75 ಕಿಲೋ ವ್ಯಾಟ್ ಸಾಮಥ್ರ್ಯದ ಗ್ರಿಡ್ ಕನೆಕ್ಟೆಡ್ ಸೌರ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಸೋಲಾರ್ ಗ್ರಿಡ್‍ನ್ನು ಪ್ರಾಧಿಕಾರದ ಆಯುಕ್ತರಾದ ಶ್ರೀ.ಪಿ.ಎಸ್.ಕಾಂತರಾಜು ರವರು ದಿನಾಂಕ 12.02.2020ರಂದು ಬೆಳಗ್ಗೆ 11.30 ಗಂಟೆಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಅಧೀಕ್ಷಕ ಅಭಿಯಂತರಾದ ಶ್ರೀ.ಶಂಕರ್, ಮೈಸೂರು ಮಹಾನಗರ ಪಾಲಿಕೆ ಅಧೀಕ್ಷಕ ಅಭಿಯಂತರಾದ ಶ್ರೀ.ಭಾಸ್ಕರ್, ಮುಖ್ಯ ಲೆಕ್ಕಾಧಿಕಾರಿಗಳಾದ ಶ್ರೀ ಮುತ್ತಾ, ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರಾದ ಶ್ರೀಮತಿ.ಸುವರ್ಣ ಹಾಗೂ ಶ್ರೀ.ಎಂ.ಆರ್.ಪಾಂಡುರಂಗ, ಮೈಸೂರು ಮಹಾನಗರ ಪಾಲಿಕೆ ಕಾರ್ಯಪಾಲ ಅಭಿಯಂತರಾದ ಶ್ರೀ.ಹರ್ಷ, ಎಲ್ಲಾ ವಲಯ ಅಧಿಕಾರಿಗಳು, ವಿದ್ಯುತ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಶ್ರೀ.ರಾಘವೇಂದ್ರರವರು, ಎಲ್ಲಾ ವಲಯ ಅಧಿಕಾರಿಗಳು ಹಾಗೂ ಅಧಿಕಾರಿವರ್ಗದವರು ಮತ್ತು ಗುತ್ತಿಗೆದಾರರ ಪರವಾಗಿ ಶ್ರೀ.ಲೋಕೇಶ್‍ರವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

75 ಕಿಲೋ ವ್ಯಾಟ್ ಸಾಮಥ್ರ್ಯದ ಗ್ರಿಡ್ ಕನೆಕ್ಟೆಡ್ ಸೌರ ವಿದ್ಯುತ್ ಉತ್ಪಾದನಾ ಘಟಕದ ವಿವರಗಳು ಕೆಳಕಂಡಂತಿದೆ.

• ಕಾಮಗಾರಿ ಮೊತ್ತ : ರೂ.44,51,850/-
• ಎಂ.ಎನ್.ಆರ್.ಇ, ನವದೆಹಲಿ - ಸಬ್ಸಿಡಿ (30%) : ರೂ.13,35,55/-
• ಪ್ರಾಧಿಕಾರದ ವಂತಿಕೆ : ರೂ.31,16,295/-
• ಗುತ್ತಿಗೆದಾರರ ಹೆಸರು : ಮೆ|| ಟೆಕ್ಚರ್ ಪವರ್ ಸಲ್ಯೂಷನ್ ಪ್ರೈ.ಲಿ
• ಸಾಮಥ್ರ್ಯ : 75 ಕಿಲೋ ವ್ಯಾಟ್
• ಪ್ಯಾನೆಲ್‍ಗಳ ಸಂಖ್ಯೆ : ಒಟ್ಟು 240 ಸಂಖ್ಯೆಗಳು
• ಪ್ರತಿ ಪ್ಯಾನೆಲ್ ಸಾಮಥ್ರ್ಯ : 315 ವ್ಯಾಟ್ಸ್
• ಉಳಿತಾದ : ರೂ.1,25,000/- (ಪ್ರತಿ ಮಾಹೆ)

ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು

ಸಂಖ್ಯೆ :ಮಸಂಖ್ಯೆ :ಮೈ.ನ.ಪ್ರಾ/ವಲಯ-4/2019-20 31.01.2020

ಪ್ರಾಧಿಕಾರಕ್ಕೆ ಸೇರಿದ ಮೈಸೂರು ನಗರ ಗೋಕುಲಂ 3ನೇ ಹಂತ (ಸೌತ್ ಆಫ್ ಕುಂಬಾರಕೊಪ್ಪಲು) ಬಡಾವಣೆಯಲ್ಲಿ ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷ ಮೌಲ್ಯದ 40x60 ಅಡಿ ಅಳತೆಯ ನಿವೇಶನದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಕಟ್ಟಡವನ್ನು ವಿ.ವಿ.ಪುರಂ ಪೊಲೀಸ್ ಠಾಣೆ, ಆರಕ್ಷಕ ಸಿಬ್ಬಂದಿ ಭದ್ರತೆಯಲ್ಲಿ ಇಂದು ದಿನಾಂಕ 31.01.2020 ಬೆಳಗ್ಗೆ 11.00 ಗಂಟೆ ಸಮಯದಲ್ಲಿ ನೆಲಸಮಗೊಳಿಸಿ ಪ್ರಾಧಿಕಾರದ ವಶಕ್ಕೆ ಪಡೆಯಲಾಯಿತು. ಈ ಸಂದರ್ಭದಲ್ಲಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಶ್ರೀ.ಹೆಚ್.ಪಿ.ಶಿವಣ್ಣ, ಸಹಾಯಕ ಅಭಿಯಂತರುಗಳಾದ ಶ್ರೀ.ಸತ್ಯನಾರಾಯಣ ಜೋಶಿ, ಶ್ರೀ.ಪುಟ್ಟನಾಗರಾಜು ಹಾಗೂ ಶ್ರೀ.ನಾಗರಾಜು ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದರು.

ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು

ಸಂಖ್ಯೆ :ಮೈ.ನ.ಪ್ರಾ/ಆಆಸಶಾ/ಪ.ಪ್ರ 2019-20 26.01.2020

 ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆವರಣದಲ್ಲಿ 71ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಪ್ರಾಧಿಕಾರದ ಮಾನ್ಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು ಆದ ಶ್ರೀ.ಅಭಿರಾಮ್ ಜಿ ಶಂಕರ್‍ರವರು ದ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತರಾದ ಶ್ರೀ.ಪಿ.ಎಸ್.ಕಾಂತರಾಜ್, ಅಧೀಕ್ಷಕ ಅಭಿಯಂತರು ಹಾಗೂ ನಗರ ಯೋಜಕ ಸದಸ್ಯರು ಶ್ರೀ.ಬಿ.ಎನ್.ಗಿರೀಶ್, ಕಾರ್ಯದರ್ಶಿ ಶ್ರೀಮತಿ.ಎಂ.ಕೆ.ಸವಿತಾ, ವಿಶೇಷ ಭೂಸ್ವಾಧೀನಾಧಿಕಾರಿ ಶ್ರೀಮತಿ.ಚಂದ್ರಮ್ಮ, ಕಾರ್ಯಪಾಲಕ ಅಭಿಯಂತರು ಶ್ರೀಮತಿ.ಸುವರ್ಣ ಹಾಗೂ ಶ್ರೀ.ಎಂ.ಆರ್.ಪಾಂಡುರಂಗ ಹಾಗೂ ಎಲ್ಲಾ ವಲಯ ಅಧಿಕಾರಿಗಳು, ಎಲ್ಲಾ ತಹಶೀಲ್ದಾರ್‍ಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು
ಸಂಖ್ಯೆ :ಮೈ.ನ.ಪ್ರಾ/ಅಆಸಶಾ/ಪ.ಪ್ರ /2019-20 - 26.06.2019
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಮೈಸೂರು ನಗರದ ನಂಜುಮಳಿಗೆಯಲ್ಲಿನ ಕೇಂದ್ರ ಸಂಪನ್ಮೂಲ ಕೇಂದ್ರದಲ್ಲಿ (ಬಿ.ಆರ್.ಸಿ) ರೂ.7.00 ಲಕ್ಷಗಳ ಅಂದಾಜು ವೆಚ್ಚದಲ್ಲಿ 06 ಶೌಚಾಲಯಗಳು ಹಾಗೂ 02 ಸ್ನಾನದ ಕೊಠಡಿಗಳ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಸದರಿ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಇಂದು ದಿನಾಂಕ 26.06.2019ರಂದು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ.ಹೆಚ್.ಎನ್.ವಿಜಯ್ ರವರು ಹಾಗೂ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎ.ರಾಮದಾಸ್‍ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಪ್ರಾಧಿಕಾರದ ಸದಸ್ಯರಾದ ಶ್ರೀ.ಎಸ್.ಬಿ.ಎಂ.ಮಂಜು ರವರು ವಾರ್ಡ್ ನಂ-49ರ ಪಾಲಿಕೆ ಸದಸ್ಯರಾದ ಶ್ರೀಮತಿ.ಸೌಮ್ಯ ಉಮೇಶ್ ರವರು, ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಶ್ರೀ.ಎಸ್.ಕೆ.ಭಾಸ್ಕರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮೈಸೂರು ಶಿಕ್ಷಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಜನಪ್ರತಿನಿಧಿಗಳು, ಸಹಾಯಕ ಅಭಿಯಂತರು ಹಾಗೂ ಇತರೆ ಸಾರ್ವಜನಿಕರು ಸ್ಥಳದಲ್ಲಿ ಹಾಜರಿದ್ದರು.
ಅಧ್ಯಕ್ಷರ ಆಪ್ತಸಹಾಯಕರು
ಪ್ರಾಧಿಕಾರ ಅಧ್ಯಕ್ಷರಾದ ಶ್ರೀ ಹೆಚ್.ಎನ್.ವಿಜಯ್ ರವರು ಹಾಗೂ ಆಯುಕ್ತರಾದ ಶ್ರೀ ಪಿ ಎಸ್ ಕಾಂತರಾಜುರವರು ಪ್ರಾಧಿಕಾರದ ವಲಯ-1 ಮತ್ತು 2ರ ವ್ಯಾಪ್ತಿಯಲ್ಲಿ ಪ್ರಾಧಿಕಾರದ ಸಂರಕ್ಷಿಸಿ ತಂತಿಬೇಲಿ ಅಳವಡಿಸಿರುವ ಆಸ್ತಿಗಳಿಗೆ ಇಂದು 18.06.2019ರಂದು ಬೆಳಗ್ಗೆ 10.00 ಗಂಟೆಗೆ ಸಂಬಂಧಪಟ್ಟ ವಲಯ ಅಧಿಕಾರಿಗಳು ಹಾಗೂ ಸಹಾಯಕ ಅಭಿಯಂತರುಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
 
ಸದರಿ ಸ್ಥಳ ಪರಿಶೀಲನಾ ಸಮಯದಲ್ಲಿ ಅಧೀಕ್ಷಕ ಅಭಿಯಂತರಾದ ಶ್ರೀ ಬಿ ಕೆ ಸುರೇಶ್ ಬಾಬುರವರು, ಕಾರ್ಯ ಪಾಲಕ ಅಭಿಯಂತರಾದ ಶ್ರೀ ಬಿ ಎನ್ ಪ್ರಭಾಕರ್, ವಲಯ ಅದಿಕಾರಿಗಳಾದ ಶ್ರೀ ಎಸ್ ಕೆ ಭಾಸ್ಕರ್, ಶ್ರೀ ಎಂ ಪಿ ದಿನೇಶ್ ಹಾಗೂ ಇತರೆ ಸಿಬ್ಬಂದಿಗಳು ಹಾಜರಿದ್ದರು.

 

ಸಂಖ್ಯೆ ಮೈನಪ್ರಾ/ಆಆಸಶಾ/2019-20
4ನೇ ಜೂನ್, 2019
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ದಿನಾಂಕ 04.06.2018 ರಂದು ಬೆಳಗ್ಗೆ 10.30 ಗಂಟೆಗೆ ಶ್ರೀ.ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 124ನೇ ಜಯಂತಿ ಕಾರ್ಯಕ್ರಮಯನ್ನು ಪ್ರಾಧಿಕಾರದ ಕಛೇರಿ ಆವರಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶೀ.ಹೆಚ್.ಎನ್.ವಿಜಯ್, ಆಯುಕ್ತರಾದ ಶ್ರೀ.ಪಿ.ಎಸ್.ಕಾಂತರಾಜು, ನಗರ ಯೋಜನಾ ಸದಸ್ಯರಾದ ಶ್ರೀ.ಬಿ.ಎನ್.ಗಿರೀಶ್, ಮುಖ್ಯ ಲೆಕ್ಕಾಧಿಕಾರಿಗಳು, ಕಾರ್ಯಪಾಲಕ ಅಭಿಯಂತರುಗಳು, ಸಹಾಯಕ ಕಾರ್ಯಪಾಲಕ ಅಭಿಯಂತರುಗಳು, ವಿಶೇಷ ತಹಶೀಲ್ದಾರ್‍ಗಳು, ಇತರೆ ಅಧಿಕಾರಿಗಳು ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು ಹಾಜರಿದ್ದರು.
ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು

ಸಂಖ್ಯೆ. ಮೈ.ನ.ಪ್ರಾ/ಲೆ.ಶಾ/ಪ್ರಾ.ಠೇ/ಮರುಪಾವತಿ/2019-20
ದಿನಾಂಕ 08.05.2019

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಈ ಹಿಂದೆ ಪ್ರಕಟಣೆ ಸಂಖ್ಯೆ:ಮೈನಪ್ರಾ/ಆರ್.ಟಿ.ನಗರ, ಚಾಮಲಾಪುರ (ನಂಜನಗೂಡು) ಲಲಿತಾದ್ರಿನಗರ ಪ್ರಕಟಣೆ-01/2011-12 ದಿನಾಂಕ:19.09.2011ರಂತೆ ನಿವೇಶನ ಆಕಾಂಕ್ಷಿದಾರರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಸದರಿ ನಿವೇಶನ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಲಲಿತಾದ್ರಿನಗರ ಮತ್ತು ಚಾಮಲಾಪುರ ಬಡಾವಣೆಗಳಲ್ಲಿ ನಿವೇಶನ ಹಂಚಿಕೆಯಾಗದ ಅರ್ಜಿದಾರರಿಗೆ, ನಿವೇಶನಾಕಾಂಕ್ಷಿಗಳು ಪ್ರಾಧಿಕಾರಕ್ಕೆ ಪಾವತಿಸಿದಂತಹ ಮುಂಗಡ ಠೇವಣಿ ಹಣವನ್ನು 2012-13ನೇ ಸಾಲಿನಲ್ಲಿ ಅರ್ಜಿಯಲ್ಲಿದ್ದ ಮಾಹಿತಿಯನುಸಾರ ಆರ್.ಟಿ.ಜಿ.ಎಸ್. ಮೂಲಕ ಹಾಗೂ ಧನಾಧೇಶಗಳ ಮೂಲಕ ಮರುಪಾವತಿಸಲಾಗಿರುತ್ತದೆ.
ಆರ್.ಟಿ.ನಗರ ಬಡಾವಣೆಯ ನಿವೇಶನ ಹಂಚಿಕೆ ಪ್ರಕ್ರಿಯೆ ನ್ಯಾಯಾಲಯದ ತಡೆಯಾಜ್ಞೆಯಿಂದ ವಿಳಂಬವಾದ ಹಿನ್ನಲೆಯಲ್ಲಿ ಅರ್ಜಿದಾರರು ಸ್ವಯಂ ಇಚ್ಚೆಯಿಂದ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಹಲವು ನಿವೇಶನಾಕಾಂಕ್ಷಿಗಳು ಮನವಿ ಸಲ್ಲಿಸಿ ಪ್ರಾರಂಭಿಕ ಠೇವಣಿ ಹಣವನ್ನು ಮರುಪಾವತಿ ಪಡೆದಿರುತ್ತಾರೆ. ಸದರಿ ಬಡಾವಣೆಯ ನಿವೇಶನ ಹಂಚಿಕೆ ಪ್ರಕ್ರಿಯೆ 2017 ಆಗಸ್ಟ್ ಮಾಹೆಯಲ್ಲಿ ಪೂರ್ಣಗೊಂಡ ನಂತರ ನಿವೇಶನ ಹಂಚಿಕೆಯಾಗದ ಅರ್ಜಿದಾರರಿಗೆ 2017-18ನೇ ಸಾಲಿನಲ್ಲಿ ಆರ್.ಟಿ.ಜಿ.ಎಸ್. ಹಾಗೂ ಧನಾಧೇಶಗಳ ಮೂಲಕ ಪ್ರಾರಂಭಿಕ ಠೇವಣಿ ಹಣವನ್ನು ಮರುಪಾವತಿಸಲಾಗಿದೆ.
ಪ್ರಾಧಿಕಾರದ ಪ್ರಕಟಣೆ ಸಂಖ್ಯೆ:ಮೈನಪ್ರಾ/ಲಲಿತಾದ್ರಿನಗರ(ಉತ್ತರ) ಪ್ರಕಟಣೆ ಸಂಖ್ಯೆ:1/2017-18 ದಿನಾಂಕ;26.07.2017ರಂದು ನಿವೇಶನ ಆಕಾಂಕ್ಷಿದಾರರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಸದರಿ ನಿವೇಶನ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ 2018 ಫೆಬ್ರವರಿ ಮಾಹೆಯಿಂದ 2019 ಮಾರ್ಚ್ ಮಾಹೆಯಲ್ಲಿ ಪ್ರಾರಂಭಿಕ ಠೇವಣಿ ಹಣವನ್ನು ಆರ್.ಟಿ.ಜಿ.ಎಸ್. ಮತ್ತು ಧನಾಧೇಶಗಳ ಮೂಲಕ ಮರುಪಾವತಿಸಲಾಗಿರುತ್ತದೆ.
ಈ ಮೇಲ್ಕಾಣಿಸಿರುವ ಪ್ರಕರಣಗಳಲ್ಲಿ ಒಂದು ವೇಳೆ ನಿವೇಶನಕ್ಕಾಗಿ ಪಾವತಿಸಿದ ಪ್ರಾರಂಭಿಕ ಠೇವಣಿ ಹಣವು ಮರುಪಾವತಿಯಾಗದೇ ಇರುವ ನಿವೇಶನ ಹಂಚಿಕೆಯಾಗದ ಅರ್ಜಿದಾರರು ಅವರುಗಳ ಬ್ಯಾಂಕ್ ಸ್ಟೇಟ್‍ಮೆಟ್‍ನ್ನು ಪರಿಶೀಲಿಸಿಕೊಂಡು ಮೂಲ ಸ್ವೀಕೃತಿ ಮತ್ತು ಬ್ಯಾಂಕ್ ಪಾಸ್‍ಬುಕ್‍ನ ಮುಖಪುಟದ ನಕಲು ಪ್ರತಿಯೊಂದಿಗೆ ಮರುಪಾವತಿಗೆ ಅರ್ಜಿ ಸಲ್ಲಿಸಿ ಠೇವಣಿ ಹಣ ಹಿಂಪಡೆಯಬಹುದೆಂದು ಈ ಮುಖಾಂತರ ಪ್ರಕಟಣೆ ಹೊರಡಿಸಿದೆ.
ಆಯುಕ್ತರು