ಮೈಸೂರು ತಾಲ್ಲೂಕು, ಕಸಬಾ ಹೋಬಳಿ, ಬಸವನಹಳ್ಳಿ ಗ್ರಾಮದ ಸ.ನಂ.4/1 ರಲ್ಲಿ 1-16.08 ಎಕರೆ, ಜಮೀನನ್ನು ಪ್ರಾಧಿಕಾರವು ವಿಜಯನಗರ 4ನೇ ಹಂತ 2ನೇ ಘಟ್ಟ ಬಡಾವಣೆ ನಿರ್ಮಾಣಕ್ಕಾಗಿ ದಿನಾಂಕ:23.12.1991 ರಂದು ಪ್ರಾಥಮಿಕ ಅಧಿಸೂಚನೆ ಹಾಗೂ ದಿನಾಂಕ:10.12.1992 ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿರುತ್ತದೆ

ಸಂಖ್ಯೆ :ಮೈ.ನ.ಪ್ರಾ/ಅಆಸಶಾ/ಪ.ಪ್ರ/2022-23 25.01.2023

ಮೈಸೂರು ತಾಲ್ಲೂಕು, ಕಸಬಾ ಹೋಬಳಿ, ಬಸವನಹಳ್ಳಿ ಗ್ರಾಮದ ಸ.ನಂ.4/1 ರಲ್ಲಿ 1-16.08 ಎಕರೆ, ಜಮೀನನ್ನು ಪ್ರಾಧಿಕಾರವು ವಿಜಯನಗರ 4ನೇ ಹಂತ 2ನೇ ಘಟ್ಟ ಬಡಾವಣೆ ನಿರ್ಮಾಣಕ್ಕಾಗಿ ದಿನಾಂಕ:23.12.1991 ರಂದು ಪ್ರಾಥಮಿಕ ಅಧಿಸೂಚನೆ ಹಾಗೂ ದಿನಾಂಕ:10.12.1992 ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿರುತ್ತದೆ. ದಿನಾಂಕ 18.07.1994ರಂದು ಅವಾರ್ಡ್ ನಿರ್ಣಯಿಸಿ. ಎಕರೆ ಒಂದಕ್ಕೆ ರೂ.40,300/-ಗಳಂತೆ ಭೂಮಾಲೀಕರಿಗೆ ರೂ.91,078/-ಗಳನ್ನು ದಿ:15.05.2002 ರಂದು ನ್ಯಾಯಾಲಯಕ್ಕೆ ಠೇವಣಿ ಮಾಡಲಾಗಿರುತ್ತದೆ.

ಈ ಮಧ್ಯೆ, ಅಂತಿಮ ಅಧಿಸೂಚನೆಯನ್ನು ರದ್ದುಪಡಿಸಲು ಘನ ಉಚ್ಛ ನ್ಯಾಯಾಲಯದ ರಿಟ್ ಪಿಟಿಷನ್ ಸಂ:47429/2017 (ಎಲ್‍ಎ-ಯುಡಿಎ) ಹಾಗೂ ರಿಟ್ ಪಿಟಿಷನ್ ಸಂಖ್ಯೆ:6749/2022 ರಂತೆ ಪ್ರಕರಣ ದಾಖಲಿಸಿರುತ್ತಾರೆ. ಪ್ರಕರಣದಲ್ಲಿ ವಿಚಾರಣೆ ನಡೆದು, ದಿ:27.09.2022ರಂದು ಪ್ರಕರಣವು ವಜಾಗೊಂಡಿರುತ್ತದೆ.

ಮೈಸೂರು ತಾಲ್ಲೂಕು, ಕಸಬಾ ಹೋಬಳಿ, ಬಸವನಹಳ್ಳಿ ಗ್ರಾಮದ ಸ.ನಂ.22/1 ರಲ್ಲಿ 4-16 ಎಕರೆ, ಜಮೀನನ್ನು ಪ್ರಾಧಿಕಾರವು ವಿಜಯನಗರ 4ನೇ ಹಂತ 2ನೇ ಘಟ್ಟ ಬಡಾವಣೆ ನಿರ್ಮಾಣಕ್ಕಾಗಿ ದಿನಾಂಕ:23.12.1991 ರಂದು ಪ್ರಾಥಮಿಕ ಅಧಿಸೂಚನೆ ಹಾಗೂ ದಿನಾಂಕ:10.12.1992 ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿರುತ್ತದೆ. ದಿನಾಂಕ:18.07.1994 ರಂದು ಅವಾರ್ಡ್ ನಿರ್ಣಯಿಸಿ, ಎಕರೆ ಒಂದಕ್ಕೆ ರೂ.58,800/-ಗಳಂತೆ ರೂ.8,57,798/-ಗಳನ್ನು ದಿ:15.05.2002 ರಂದು ನ್ಯಾಯಾಲಯಕ್ಕೆ ಠೇವಣಿ ಮಾಡಲಾಗಿರುತ್ತದೆ.

ಈ ಮಧ್ಯೆ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸಲು ಘನ ಉಚ್ಛ ನ್ಯಾಯಾಲಯದಲ್ಲಿರಿಟ್ ಪಿಟಿಷನ್ ಸಂಖ್ಯೆ:6749/2022 ರಂತೆ ಪ್ರಕರಣ ದಾಖಲಿಸಿ, ಪ್ರಕರಣದಲ್ಲಿ ವಿಚಾರಣೆ ನಡೆದು, ದಿ:27.09.2022 ರಂದು ವಜಾಗೊಂಡಿರುತ್ತದೆ.

ಘನ ಉಚ್ಚ ನ್ಯಾಯಾಲಯದ ಆದೇಶದಂತೆ ಪ್ರಾಧಿಕಾರಕ್ಕೆ ಸೇರಿದ ಬಸವನಹಳ್ಳಿ ಗ್ರಾಮ ಸರ್ವೆ ನಂ-22/1ರ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಕಟ್ಟಡಗಳನ್ನು ಆರಕ್ಷಕ ಸಿಬ್ಬಂದಿ ಭದ್ರತೆಯೊಂದಿಗೆ ದಿನಾಂಕ:25.01.2023ರಂದು ಬೆಳಗ್ಗೆ 5.30ರ ಸಮಯದಲ್ಲಿ ಪ್ರಾಧಿಕಾರದ ವಶಕ್ಕೆ ಪಡೆಯಲಾಗಿರುತ್ತದೆ.

ಪ್ರಾಧಿಕಾರದ ವಶಕ್ಕೆ ಪಡೆಯಲಾದ ಬಸವನಹಳ್ಳಿ ಗ್ರಾಮದ ಸರ್ವೆ ನಂ-4/1ರಲ್ಲಿ 1-16.08 ಮತ್ತು 22/1ರಲ್ಲಿ 4-16 ಎಕರೆ ಜಮೀನಿನ ಒಟ್ಟು ಮೌಲ್ಯ ರೂ.40.00 ಕೋಟಿಗಳಾಗಿರುತ್ತದೆ.

ಈ ಸಂದರ್ಭದಲ್ಲಿ ಆಯುಕ್ತರಾದ ಶ್ರೀ.ಜಿ.ಟಿ.ದಿನೇಶ್‍ಕುಮಾರ್, ಅಧೀಕ್ಷಕ ಅಭಿಯಂತರರು ಶ್ರೀ.ಚನ್ನಕೇಶವ, ವಿಶೇಷ ಭೂಸ್ವಾಧೀನಾಧಿಕಾರಿ ಶ್ರೀ.ವಿಷ್ಣುವರ್ಧನ, ಕಾರ್ಯಪಾಲಕ ಅಭಿಯಂತರರಾದ ಶ್ರೀ.ದೇವೇಂದ್ರಪ್ಪ ಮತ್ತು ಶ್ರೀ.ಜಿ.ಮೋಹನ್, ಎಲ್ಲಾ ವಲಯ ಅಧಿಕಾರಿಗಳು ಹಾಗೂ ಎಲ್ಲಾ ಸಹಾಯಕ/ಕಿರಿಯ ಅಭಿಯಂತರರು ಹಾಗೂ ಸಿಬ್ಬಂದಿಗಳು ಹಾಜರಿದ್ದರು

ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು


 

Skip to content