Authority

The Government of Karnataka established the Urban Development Authorities for the planned development of major and important urban areas in the State and the area adjacent thereto and to matters connected therewith under the Karnataka Urban Development Authorities Act 1987.

As per the said Act, the City Improvement Trust Board (C. I. T. B), Mysore and Local Planning Authority of Mysore was amalgamated and the present Mysore Urban Development Authority came into existence. The Mysore Urban Development Authority (MUDA) was constituted on 16th May 1988.

As per the KUDA Act 1987, the Commissioner of the Authority is the Chief Administrator and Chief Executive of the authority.

The Chairman heads the authority. He can call the meeting of the authority and put policy issues before the authority for decision.

As per the KUDA Act 1987 the Chairman, The Engineer and the Town Planner shall be the whole time members and other members shall be part time members.

The authority has formed many layouts and distributed nearly 35,000 sites and 10,000 houses after it came into existence. Also it has handed over the developed layouts to Mysore City Corporation for further maintenance.

Vijayanagara Layout Ist, IInd, IIIrd and IVth Stage, formed by the Authority, is the biggest layout in South Asia, covering an area of nearly 2000 acres having 25,000 sites.


ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ

ಕರ್ನಾಟಕ ಸರ್ಕಾರವು ಪ್ರಧಾನ ಮತ್ತು ಪ್ರಮುಖ ನಗರ ಪ್ರದೇಶಗಳ ಯೋಜಿತ ಅಭಿವೃದ್ಧಿಗಾಗಿ ನಗರಾಭಿವೃದ್ಧಿ ಪ್ರಾಧಿಕಾರಗಳನ್ನು ಸ್ಥಾಪಿಸಿತು. ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರಂತೆ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ನಗರ/ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮತ್ತು ಇದಕ್ಕೆ ಸಂಬಂಧಿಸಿದ ಕೆಲಸಗಳನ್ನು ನೋಡಿಕೊಳ್ಳುತ್ತವೆ.

ಈ ಕಾಯ್ದೆಯ ಪ್ರಕಾರ ನಗರ ಅಭಿವೃದ್ಧಿ ಪ್ರತಿಷ್ಠಾನ ಮಂಡಲಿ(ಸಿಐಟಿಬಿ), ಮೈಸೂರು ಮತ್ತು ಮೈಸೂರು ಸ್ಥಳೀಯ ಯೋಜನಾ ಪ್ರಾಧಿಕಾರಗಳನ್ನು ಒಟ್ಟಾಗಿ ಸೇರಿಸಿ, ಈಗಿನ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರವನ್ನು ಆರಂಭಿಸಲಾಯಿತು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ವು 1988ರ ಮೇ 16 ರಂದು ಸ್ಥಾಪನೆಯಾಯಿತು.

ಕೆಯುಡಿಎ ಕಾಯ್ದೆ 1987ರ ಪ್ರಕಾರ ಪ್ರಾಧಿಕಾರದ ಆಯುಕ್ತರೇ ಮುಖ್ಯ ಆಡಳಿತಗಾರ ಮತ್ತು ಮುಖ್ಯ ಕಾರ್ಯನಿರ್ವಾಹಕರಾಗಿರುತ್ತಾರೆ. 

ಪ್ರಾಧಿಕಾರಕ್ಕೆ ಅಧ್ಯಕ್ಷರೇ ಮುಖ್ಯಸ್ಥರಾಗಿರುತ್ತಾರೆ. ಇವರು ಪ್ರಾಧಿಕಾರದ ಸಭೆ ಕರೆದು ಮತ್ತು ನೀತಿ ನಿರೂಪಣೆಯ ವಿಷಯಗಳನ್ನು ನಿರ್ಧಾರಕ್ಕಾಗಿ ಪ್ರಾಧಿಕಾರದ ಮುಂದೆ ಇಡಬಹುದಾಗಿದೆ.

1987ರ ಕೆಯುಡಿಎ ಕಾಯ್ದೆ ಪ್ರಕಾರ ಅಧ್ಯಕ್ಷರು ಮತ್ತು ಎಂಜಿನಿಯರ್ ಹಾಗೂ ನಗರ ಯೋಜನಾ ಸದಸ್ಯರು ಪೂರ್ನಾವಧಿ ಸದಸ್ಯರಾಗಿದ್ದು, ಇತರೆ ಸದಸ್ಯರು ಅರೆಕಾಲಿಕ ಸದಸ್ಯರಾಗಿರುತ್ತಾರೆ.

ಪ್ರಾಧಿಕಾರ ಆರಂಭವಾದ ಮೇಲೆ ಹಲವಾರು ಲೇಔಟ್ ಗಳನ್ನು ನಿರ್ಮಿಸಿದೆ. ಇದುವರೆವಿಗೆ, ಸುಮಾರು 35 ಸಾವಿರ ನಿವೇಶನಗಳು ಮತ್ತು  10 ಸಾವಿರ ಮನೆಗಳನ್ನು ಹಂಚಿಕೆ ಮಾಡಿದೆ. ಇದರ ಜೊತೆಗೆ ಅಭಿವೃದ್ಧಿಗೊಂಡಂಥ ಲೇಔಟ್ ಗಳನ್ನು ಹೆಚ್ಚಿನ ನಿರ್ವಹಣೆಗಾಗಿ ಮೈಸೂರು ನಗರ ಪಾಲಿಕೆ ವಶಕ್ಕೆ ನೀಡಿದೆ.

ವಿಜಯ ನಗರ ಲೇಔಟ್  ಮೊದಲನೇ, ಎರಡನೇ, ಮೂರನೇ ಮತ್ತು ನಾಲ್ಕನೇ ಹಂತಗಳನ್ನು ಪ್ರಾಧಿಕಾರವೇ ನಿರ್ಮಿಸಿದೆ. ಇದು ದಕ್ಷಿಣ ಏಷ್ಯಾದಲ್ಲೇ ಅತ್ಯಂತ ದೊಡ್ಡ ಲೇಔಟ್ ಆಗಿದೆ. ಇದು 2000 ಎಕರೆ ಜಾಗದಲ್ಲಿದ್ದು, 25 ಸಾವಿರ ನಿವೇಶನಗಳನ್ನು ನೀಡಲಾಗಿದೆ.

Skip to content