Departments

MUDA or Mysore Urban Development Authority involves various departments to take part for development of Residential sites, commercial sites or Industrial sites.

Each department play significant role to improve the infrastructure of Mysore.

Commissioner
Commissioner is chief executive and administrative officer of the authority. The overall control and co-ordination of various sections mentioned below to implement successfully schemes of authority is the basic duty of Commissioner.

MUDA Departments

  1. Land Acquisition Department
    The Land Acquisition Department works in close liaison with the Engineering Department for the purpose of acquiring lands required for executing various developmental schemes & formation of new layouts.

     
  2. Town Planning Department
    The Town Planning Department is responsible for preparation and revision of the Comprehensive Development Plan for Mysore City, periodically, preparation of Layout Plans, approval of Development Plans for Layouts and Group Housing Schemes and generally assists the Authority in its function as the Planning Authority for Mysore. It also monitors the change of land use in the CDP area
  3. Engineering Department
    The Engineering Department is primarily concerned with the execution of various developmental schemes in the layouts as also infrastructural works. This department also monitors the execution of water supply and underground drainage works in MDA layouts taken up by BWSSB and electrification works executed by CHESCOM and also takes of works on self execution
  4. Allotment & General Administration Department
    The Allotment & Administration Department handles all matters pertaining to allotment of sites, shops and houses, assessment of property tax, leases and shop rents. The Department is also entrusted with the responsibility of all establishment and general administrative matters.
  5. Finance Department
    The Finance Department renders advise to the Authority on various financial issues and is also entrusted with the responsibility of maintenance of the accounts of the Authority. This Department also oversees the demand, collection and balance of dues to the Authority
  6. Law Department
    The Law Department advises the Authority on various legal issues, handles litigations by and against the Authority in various courts, etc
  7. Public Relations Department
    The Public Relations Department receives applications for various purposes from public on acknowledgement and thereafter transmit them to various departments for necessary action. Apart from the above, Public Relations office handles the media issues. These include publication of press notes, advertisements as also rejoinders and clarifications with reference to reports appearing in newspapers about the Organisation

Tahsildar

  • Khatha Registration
  • Transfer of Khatha
  • Tax Fixation of Sites
  • Tax Fixation of House

ಪ್ರಾಧಿಕಾರವು ಈ ಕೆಳಕಂಡ ಶಾಖೆಗಳನ್ನು ಹೊಂದಿರುತ್ತದೆ.

  1. ಆಡಳಿತ ಶಾಖೆ
  2. ತಾಂತ್ರಿಕ ಶಾಖೆ
  3. ನಗರಯೋಜನಾ ಶಾಖೆ
  4. ಭೂಸ್ವಾಧೀನ ಶಾಖೆ
  5. ಲೆಕ್ಕ ಶಾಖೆ
  6. ಕಾನೂನು ಶಾಖೆ
  7. ಕಂದಾಯ ಶಾಖೆ
  8. ತೋಟಗಾರಿಕೆ ಶಾಖೆ
  9. ಸಾರ್ವಜನಿಕ ಸಂಪರ್ಕ ಶಾಖೆ
  10. ಗಣಕ ಶಾಖೆ
  11. ನಿವೇಶನ/ಅರ್ಜಿ ಶಾಖೆ

 

Departments

ಆಡಳಿತ ಶಾಖೆ ನಿವೇಶನಗಳು, ಅಂಗಡಿಗಳು ಮತ್ತು ಮನೆಗಳ ಹಂಚಿಕೆಯ ಕಾರ್ಯ, ಆಸ್ತಿ-ತೆರಿಗೆ, ಗುತ್ತಿಗೆ ಹಣ ಮತ್ತು ಅಂಗಡಿ ಬಾಡಿಗೆಯನ್ನು ವಸೂಲು ಮಾಡುವ ಕಾರ್ಯವನ್ನು ನಿರ್ವಹಿಸುತ್ತದೆ. ಅಲ್ಲದೆ ಈ ವಿಭಾಗಕ್ಕೆ ಸಾಮಾನ್ಯ ಆಡಳಿತ ವಿಷಯ ಮತ್ತು ಸಿಬ್ಬಂದಿ ಇವುಗಳ ನಿರ್ವಹಣೆಯ ಜವಾಬ್ದಾರಿಯೂ ಇದೆ.
ನೂತನ ಬಡಾವಣೆಗಳ ನಿರ್ಮಾಣ, ಬಡಾವಣೆಗಳ ನಿರ್ಮಾಣ, ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಅಭಿಯಂತರ ವಿಭಾಗದ ಪ್ರಾಥಮಿಕ ಕರ್ತವ್ಯವಾಗಿರುತ್ತದೆ. ಪ್ರಾಧಿಕಾರದ ಬಡಾವಣೆಗಳಲ್ಲಿ ರಸ್ತೆ, ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ಹೊರ ವಿದ್ಯುತ್, ಉದ್ಯಾನವನಗಳನ್ನು ನಿರ್ಮಿಸುವುದು ತಾಂತ್ರಿಕ ಶಾಖೆ ಮುಖ್ಯ ಹೊಣೆಯಾಗಿರುತ್ತದೆ.
ಮೈಸೂರು ನಗರಕ್ಕೆ ಮಹಾಯೋಜನೆ ತಯಾರಿಸುವುದು, ನೂತನ ಬಡಾವಣೆಗಳ ನಕ್ಷೆಯನ್ನು ತಯಾರಿಸುವುದು., ಸಮೂಹ ವಸತಿ ಯೋಜನೆಗಳಿಗೆ ಹಾಗೂ ಖಾಸಗಿ ಬಡಾವಣೆಗಳಿಗೆ ಅಭಿವೃದ್ಧಿ ನಕ್ಷೆಯನ್ನು ಅನುಮೋದಿಸುವುದು ಮತ್ತು “ಮೈಸೂರು ನಗರ ಯೋಜನಾ ಪ್ರಾಧಿಕಾರ” ದ ಪ್ರಕಾರ್ಯಗಳಲ್ಲಿ ನೆರವು ನೀಡುವುದು ನಗರ ಯೋಜನಾ ಶಾಖೆಯ ಹೊಣೆಯಾಗಿರುತ್ತದೆ.
ಬಡಾವಣೆಗಳ ನಿರ್ಮಾಣ ಮತ್ತು ಇತರೆ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಾದ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವುದು ಭೂಸ್ವಾಧೀನ ಶಾಖೆಯ ಕೆಲಸವಾಗಿರುತ್ತದೆ.
ಲೆಕ್ಕ ಶಾಖೆಯು ಪ್ರಾಧಿಕಾರದ ಆಯ ವ್ಯಯಗಳನ್ನು ಸಿದ್ದಪಡಿಸಿ ಅದರ ಪ್ರಕಾರ ಕೆಲಸಗಳನ್ನು ಅನುಷ್ಠಾನಗೊಳಿಸಲು ಮಾರ್ಗ ಸೂಚಿಯಾಗಿರುತ್ತದೆ.
ಪ್ರಾಧಿಕಾರದ ವಿವಿಧ ಕಾನೂನು ವಿಷಯಗಳಲ್ಲಿ ಸಲಹೆ ನೀಡುವುದು ಹಾಗೂ ವಿವಿಧ ನ್ಯಾಯಾಲಯದಲ್ಲಿರುವ ವ್ಯಾಜ್ಯಗಳಲ್ಲಿ ಪ್ರಾಧಿಕಾರದ ಹಿತಾಸಕ್ತಿಗಳನ್ನು ಸಂರಕ್ಷಿಸುವುದು ಕಾನೂನು ಶಾಖೆಯ ಕರ್ತವ್ಯವಾಗಿರುತ್ತದೆ.
ಪ್ರಾಧಿಕಾರದ ಅಧೀನದಲ್ಲಿರುವ ಆಸ್ತಿಗಳ ಖಾತೆ ನೀಡುವುದು ಮತ್ತು ಕಂದಾಯ ವಸೂಲಾತಿ ಹಾಗೂ ಬೇಡಿಕೆ ವಸೂಲಾತಿ ಮತ್ತು ಬಾಕಿ ಇವುಗಳನ್ನು ನಿರ್ವಹಿಸುವುದು ಕಂದಾಯ ಶಾಖೆಯ ಕೆಲಸವಾಗಿರುತ್ತದೆ.
ಪರಿಸರ ಸಂಬಂಧಿ ಕಾರ್ಯಚರಣೆ, ಉದ್ಯಾನವನಗಳ ಅಭಿವೃದ್ಧಿ ಮತ್ತು ನಿರ್ವಹಣೆ ಕಾರ್ಯಗಳನ್ನು ತೋಟಗಾರಿಕಾ ಶಾಖೆಯು ನಿರ್ವಹಿಸುತ್ತದೆ. ಸಾರ್ವಜನಿಕ ಸಂಪರ್ಕ ಶಾಖೆ : ಸಾರ್ವಜನಿಕರಿಗೆ ಪ್ರಾಧಿಕಾರದಿಂದ ಆಗಬೇಕಾದ ಕೆಲಸಗಳು ಸಮಯಕ್ಕೆ ಸರಿಯಾಗಿ ಮಾಡಿಕೊಡುವಲ್ಲಿ ಸೋಪಾನವಾಗಿ ಸಾರ್ವಜನಿಕ ಸಂಪರ್ಕ ಶಾಖೆಯು ಕೆಲಸ ನಿರ್ವಹಿಸುತ್ತಿರುತ್ತದೆ.
ಪ್ರಾಧಿಕಾರದ ಕೆಲಸಗಳ ಕಣಕೀಕರಣ ಮತ್ತು ದಾಖಲೆಗಳ ಗಣಕೀಕರಣ ಕೆಲಸಗಳನ್ನು ಕಣಕ ಶಾಖೆಯು ನಿರ್ವಹಿಸುತ್ತಿರುತ್ತದೆ.
ನಿವೇಶನಗಳ ಹಂಚಿಕೆ, ಮಂಜೂರಾತಿ ಪತ್ರ, ಸ್ವಾಧೀನಪತ್ರ, ಖಾತಾ ಪತ್ರ ಹಾಗೂ ಕ್ರಯಪತ್ರ ವಿತರಿಸುವ ಕಾರ್ಯ ನಿರ್ವಹಿಸುತ್ತಿರುತ್ತದೆ. ಹಾಗೂ ಬಿಡಿ ನಿವೇಶನಗಳನ್ನು ಗುರುತಿಸಿ ರದ್ದುಪಡಿಸಲು ಕ್ರಮವಹಿಸಲಾಗಿದೆ. ಈ ಹಿಂದೆ ಮಂಜೂರಾಗಿರುವ ನಿವೇಶನಗಳಿಗೆ ಸಂಬಂಧಿಸಿದಂತೆ 8 ವಲಯ ಕಛೇರಿಗಳಿಂದ ಅಂತಿಮವಾಗಿ ಕರ್ನಾಟಕ ನಗರಾಭಿವೃದ್ಧಿ (ನಿವೇಶಗಳ ಹಂಚಿಕೆ) ನಿಯಮಗಳು 1991ರ ನಿಯಮ 19(1) ರ ಮಂಜೂರಾತಿ ಷರತ್ತಿನಂತೆ ನಿಗಧಿತ ಅವಧಿಯೊಳಗೆ ಪೂರ್ಣ ಹಣ ಪಾವತಿಸದ ಕಾರಣ ಹಾಗೂ ಇತರೆ ಕಾರಣಗಳಿಂದಾಗಿ ನಿಯಮ ಉಲ್ಲಂಘನೆಯಾಗಿರುವ ಒಟ್ಟಾರೆ 1255 ನಿವೇಶನಗಳನ್ನು ಬಿಡಿ ನಿವೇಶನಗಳನ್ನಾಗಿ ಗುರಿತಿಸಿ ರದ್ದುಪಡಿಸಲಾಗಿದ್ದು, ಸರ್ಕಾರದ ಸುತ್ತೋಲೆ ಸಂಖ್ಯೆ. ನಅಇ/291/ಅಪ್ರಾವ/98, ದಿನಾಂಕ 24.11.2000 ರ ಮಾರ್ಗಸೂಚಿಗಳನ್ನು ಅನುಸರಿಸಿ ಕ್ರಮವಹಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅನುಮೊದನೆ ನಿರೀಕ್ಷಿಸಲಾಗುತ್ತಿದೆ. ಪ್ರಾಧಿಕಾರದಲ್ಲಿ ಈವರೆವಿಗೂ ಮಂಜೂರು ಮಾಡಲಾದ ನಾಗರೀಕ ಸೌಕರ್ಯ ನಿವೇಶನಗಳನ್ನು ಗುರುತಿಸಿ, ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ (ನಾಗರೀಕ ಸೌಕರ್ಯ ನಿವೇಶನಗಳ ಹಂಚಿಕೆ) ನಿಯಮಗಳು 1991 ರ ಉಪ ನಿಯಮಗಳನ್ವಯ ಉಲ್ಲಂಘನೆಯಾಗಿರುವ ಪ್ರಕರಣಗಳನ್ನು ಗುರುತಿಸಲು ಕ್ರಮವಹಿಸಲಾಗಿದ್ದು, ಲಭ್ಯವಿರುವ ಮಾಹಿತಿಯಂತೆ ಈವರೆವಿಗೆ ಒಟ್ಟು – 629 ಸಿ.ಎ ನಿವೇಶನಗಳನ್ನು ಮಂಜೂರು ಮಾಡಲಾಗಿರುತ್ತದೆ.
Skip to content