RTI

ಮಾಹಿತಿ ಲಭ್ಯತೆ

ಸಾರ್ವಜನಿಕರಿಗೆ ಮತ್ತು ಬಳಕೆದಾರರಿಗೆ ಮಾಹಿತಿ ಮತ್ತು ಸಂಪರ್ಕ ನೀಡುವ ಸಲುವಾಗಿ ಮುಡಾವು ಪರಿಣಾಮಕಾರಿ ಮತ್ತು ಅತ್ಯುನ್ನತ ಮಾರ್ಗಗಳನ್ನು ರಚಿಸಿದೆ:

  • ಎಲ್ಲಾ ಯೋಜನೆಗಳು, ನಿಯಮಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮೊದಲೇ ಮುದ್ರಿತವಾದ ಬ್ರೌಷರ್ ಇತ್ಯಾದಿ.
  • ಕಡಿಮೆ ವೆಚ್ಚದಲ್ಲಿ ಮೊದಲೇ ವಿವರಿಸಲ್ಪಟ್ಟ ದಾಖಲೆಗಳ ವ್ಯವಹಾರಗಳ ದಾಖಲೆಗಳನ್ನು ನೀಡುವುದು.
  • ಪ್ರಮುಖ ದಿನಪತ್ರಿಕೆಗಳಲ್ಲಿ ಸಾರ್ವಜನಿಕ ಸೂಚನೆ ನೀಡುವುದು.
  • ಪರಿಣಾಮಕಾರಿಯಾದ ವಿಚಾರಣಾ ವಿಭಾಗ ತೆರೆದು ಸಲಹೆಗಾರರ ನೇಮಕ ಮಾಡುವುದು.
  • ಮಾಹಿತಿಯ ಪ್ರಚಾರಕ್ಕಾಗಿ ಮುದ್ರಣ ಮತ್ತು ದೃಷ್ಯ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು.

ಸಾರ್ವಜನಿಕ ಕುಂದುಕೊರತೆ

  • ಸಾರ್ವಜನಿಕರಿಗೆ ಆಗುವ ಕಿರಿಕಿರಿ ತಪ್ಪಿಸುವ ಸಲುವಾಗಿ ಮುಡಾವು ಪರಿಣಾಮಕಾರಿಯಾದ ಸಾರ್ವಜನಿಕ ಕುಂದುಕೊರತೆ ವಿಭಾಗ ಸ್ಥಾಪಿಸುವುದು, ಸಾರ್ವಜನಿಕರಿಗೆ ನೆರವಾಗುವ ಭರವಸೆ ನೀಡಿದೆ.
  • ಪ್ರಧಾನ ಕಚೇರಿಗಳಲ್ಲಿ ನೈತಿಕ ಸಮಿತಿ ರಚಿಸಿ ಅಧಿಕಾರಿಗಳ ವಿರುದ್ಧ ನೀಡಿರುವ ದೂರುಗಳ ಬಗ್ಗೆ ಕ್ರಮ ತೆಗೆದುಕೊಳ್ಳಲು ಕಾಲ ಮಿತಿ ರಚಿಸುವುದು.
  • ನಿರ್ಮಾಣ ಹಂತ, ಸೇವೆಗಳು ಮತ್ತು ಸೌಲಭ್ಯಗಳಿಗೆ ಸಂಬಂಧಿಸಿದಂತೆ ಗುಣಮಟ್ಟ ನಿಯಂತ್ರಣ ಮತ್ತು ಪರಿಶೀಲನಾ ಸಮಿತಿ ರಚಿಸಿ, ಸಾರ್ವಜನಿಕರ ಎಲ್ಲಾ ಕುಂದುಕೊರತೆಗಳ ಸಂಬಂಧಿಸಿದ ದೂರುಗಳನ್ನು ನಿವಾರಿಸುವುದು.
  • ಹೆಚ್ಚುವರಿ ಮುಖ್ಯ ಆಡಳಿತಾಗಾರ ಮತ್ತು ಇಓ ಮೂಲಕ ತ್ವರಿತಗತಿಯಲ್ಲಿ ಸಾರ್ವಜನಿಕರ ದೂರುಗಳ ವಿಚಾರಣೆ ನಡೆಸುವುದು..
  • ಪ್ರಧಾನ ಕಚೇರಿಯಲ್ಲಿ ಹಿರಿಯ ಅಧಿಕಾರಿಯನ್ನು ನೇಮಕ ಮಾಡಿ, ಪರಿಶೀಲನೆ ಮತ್ತು ತ್ವರಿತಗತಿಯಲ್ಲಿ ಕ್ರಮ ತೆಗೆದುಕೊಳ್ಳುವಂತೆ ಮಾಡುವುದು.
  • ನಿಗದಿತ ಸಮಯದಲ್ಲಿ ಸಾರ್ವಜನಿಕರ ಕುಂದುಕೊರತೆ ಬಗೆಹರಿಯದಿದ್ದರೆ ಹಿರಿಯ ಅಧಿಕಾರಿಗಳೇ ಸಾರ್ವಜನಿಕರಿಗೆ ಸಿಗುವಂತೆ ಮಾಡುವುದು.

ಗ್ರಾಹಕರ ಭಾದ್ಯತೆಗಳು

  • ಈ ಸೇವೆಗಳನ್ನು ನಿರೀಕ್ಷಿಸುವವರಿಂದ ಪರಿಣಾಮಕಾರಿಯಾದ ಹೊಣೆಗಾರಿಕೆ ಮತ್ತು ಭಾಧ್ಯತೆಗಳ ವಿಸರ್ಜನೆ ಮಾಡುವುದು.
  • ಮಧ್ಯವರ್ತಿಗಳಿಂದ ಯಾವುದೇ ಸೇವೆ ಪಡೆಯದೇ ಇರುವುದು.
  • ಲಂಚದ ಮೂಲಕ ಯಾವುದೇ ಉದ್ಯೋಗಿಯಿಂದ ನೆರವನ್ನು ಕೇಳಬಾರದು.
  • ಮಂಜೂರಾತಿ ಸಂದರ್ಭದಲ್ಲಿ ನೀಡಲಾಗುವ ಎಲ್ಲಾ ಷರತ್ತುಗಳನ್ನು ಪಾಲಿಸುವುದು ಮತ್ತು ಮಂಜೂರಾದ ಸ್ಥಳದ ನಿರ್ವಹಣೆಯನ್ನು ನೋಡಿಕೊಳ್ಳುವುದು.
  • ಮಂಜೂರಾದ ಯೋಜನೆ ಪ್ರಕಾರವೇ ಕಟ್ಟಡದ ನಿರ್ಮಾಣ ಮಾಡಬೇಕು.
  • ಯಾವುದೇ ಅನಧಿಕೃತ ನಿರ್ಮಾಣಗಳಿಗೆ ಅವಕಾಶ ನೀಡಬಾರದು.
  • ಸಾರ್ವಜನಿಕ ಆಸ್ತಿಯನ್ನು ಒತ್ತುವರಿ ಮಾಡಬಾರದು.
  • ಅನಧಿಕೃತ ಮತ್ತು ಮಂಜೂರಾಗದ ಕಾಲೋನಿ ನಿರ್ಮಾಣ ಮಾಡುವವರಿಂದ ನಿವೇಶನ ಖರೀದಿ ಮಾಡಬಾರದು.
  • ಸಾರ್ವಜನಿಕ ಮೂಲಸೌಕರ್ಯ ಮತ್ತು ಷರತ್ತುಗಳ ಜಾರಿ ವಿಷಯದಲ್ಲಿ ಎಲ್ಲಾ ರೀತಿಯ ಸಹಕಾರ ಮತ್ತು ಬೆಂಬಲ ನೀಡುವುದು.

ಸಮುದಾಯಕ್ಕೆ ಉತ್ತಮ ರೀತಿಯ ಸೇವೆ ನೀಡುವ ಸಲುವಾಗಿ ಮುಡಾ ಎಲ್ಲಾ ರೀತಿ ಸಲಹೆ ಮತ್ತು ಪ್ರತಿಕ್ರಿಯೆಗಳನ್ನು ಸ್ವಾಗತಿಸುತ್ತದೆ.
ದಯಮಾಡಿ ಯಾವುದೇ ಅಳುಕಿಲ್ಲದೇ ಬರೆಯಿರಿ:
ಮುಡಾ ಆಯುಕ್ತ

commissioner@mudamysore.gov.in

Officer’s Details  :: Click to View PDF File

 

Skip to content